ಕೋಚ್ ಆಗ್ತೀರಾ ಎಂಬ ಪ್ರಶ್ನೆ ಕೇಳಿ ಕೇಳಿ ಸಾಕಾಯ್ತು ಅಂತಿದ್ದಾರೆ ಗೌತಮ್ ಗಂಭೀರ್

Krishnaveni K

ಶನಿವಾರ, 22 ಜೂನ್ 2024 (14:11 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಈಗಾಗಲೇ ಗಂಭೀರ್ ಸಂದರ್ಶನವನ್ನೂ ಮುಗಿಸಿದ್ದಾರೆ. ಆದರೆ ಬಿಸಿಸಿಐ ಇನ್ನೂ ಘೋಷಣೆ ಮಾಡಿಲ್ಲ.

ಹೀಗಾಗಿ ಭಾರತ ತಂಡದ ಮುಂದಿನ ಕೋಚ್ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. ಈ ನಡುವೆ ಗಂಭೀರ್ ಎಲ್ಲೇ ಹೋದರೂ ಮಾಧ್ಯಮಗಳು, ಅಭಿಮಾನಿಗಳು ಅವರನ್ನು ನೀವು ಟೀಂ ಇಂಡಿಯಾ ಮುಂದಿನ ಕೋಚ್ ಆಗುವುದು ಪಕ್ಕಾನಾ? ಸಂದರ್ಶನದಲ್ಲಿ ಏನು ಹೇಳಿದ್ರಿ ಎಂದು ಪ್ರಶ್ನೆ ಮಾಡುತ್ತಲೇ ಇದೆ.

ಆದರೆ ಬಿಸಿಸಿಐ ಘೋಷಣೆ ಮಾಡದೇ ಗಂಭೀರ್ ಏನನ್ನೂ ಹೇಳದ ಪರಿಸ್ಥಿತಿಯಲ್ಲಿದ್ದಾರೆ. ಆದರೆ ಮಾಧ್ಯಮಗಳ ಪ್ರಶ್ನೆಗಳಿಂದ ಬೇಸತ್ತ ಗಂಭೀರ್ ‘ನೀವು ನನಗೆ ತುಂಬಾ ಕಠಿಣವಾದ ಪ್ರಶ್ನೆ ಕೇಳಿ ನನ್ನನ್ನು ಕಟ್ಟಿಹಾಕುತ್ತಿದ್ದೀರಿ. ಸದ್ಯಕ್ಕೆ ನಾನು ಏನೂ ಹೇಳುವ ಹಾಗಿಲ್ಲ. ಸದ್ಯಕ್ಕೆ ನಾನು ತುಂಬಾ ಸಂತೋಷವಾಗಿದ್ದೇನೆ’ ಎಂದಷ್ಟೇ ಹೇಳಬಲ್ಲೆ’ ಎಂದಿದ್ದಾರೆ.

ಗೌತಮ್ ಗಂಭೀರ್ ರನ್ನು ಈಗಾಗಲೇ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರು ಮುಖ್ಯ ಕೋಚ್ ಹುದ್ದೆಗೆ ಸಂದರ್ಶನ ನಡೆಸಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯವಾಗಲಿದೆ. ಅದರ ಬೆನ್ನಲ್ಲೇ ಹೊಸ ಕೋಚ್ ನ ಹೆಸರು ಘೋಷಣೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ