IND vs AUS: ಆಸ್ಟ್ರೇಲಿಯಾದಿಂದ ಯಶಸ್ವಿ ಜೈಸ್ವಾಲ್ ಗೆ ಚೀಟಿಂಗ್, ಇದು ಔಟಾ ನೀವೇ ಹೇಳಿ

Krishnaveni K

ಸೋಮವಾರ, 30 ಡಿಸೆಂಬರ್ 2024 (11:49 IST)
Photo Credit: X
ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ ಟೀಂ ಇಂಡಿಯಾ ಆರಂಭಿಕ ಯಶಸ್ವಿ ಜೈಸ್ವಾಲ್ ಪಾಲಿಗೆ ಅಂಪಾಯರ್ ಗಳೇ ವಿಲನ್ ಆಗಿದ್ದಾರೆ.

ಭಾರತ ಇಂದು ಆಸ್ಟ್ರೇಲಿಯಾ ನೀಡಿದ 330 ರನ್ ಗಳ ಗೆಲುವಿನ ಗುರಿ ಬೆನ್ನತ್ತುವಾಗ ಮೂರು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ರಿಷಭ್ ಪಂತ್ ಜೊತೆಗೆ ಯಶಸ್ವಿ ಜೈಸ್ವಾಲ್ ಉತ್ತಮ ಜೊತೆಯಾಟವಾಡುತ್ತಿದ್ದರು. ಆದರೆ ಭಾರತ ಚೇತರಿಕೆಯ ಹಾದಿಯಲ್ಲಿರುವಾಗಲೇ ಅಂಪಾಯರ್ ವಿವಾದಾತ್ಮಕ ತೀರ್ಪಿಗೆ ಜೈಸ್ವಾಲ್ ವಿಕೆಟ್ ಒಪ್ಪಿಸಬೇಕಾಯಿತು. ಇದು ಭಾರತದ ಕುಸಿತಕ್ಕೆ ನಾಂದಿ ಹಾಡಿತು.

208 ಎಸೆತ ಎದುರಿಸಿ 84 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಕುಮಿನ್ಸ್ ಎಸೆತದಲ್ಲಿ ಔಟ್ ತೀರ್ಪು ನೀಡಲಾಗಿದೆ. ಕುಮಿನ್ಸ್ ಎಸೆತ ಜೈಸ್ವಾಲ್ ಗ್ಲೌಸ್ ಸನಿಹದಿಂದಲೇ ಹಾದು ಹೋಗಿತ್ತು. ಅಂಪಾಯರ್ ಗಳು ಸ್ನಿಕೋ ಮೀಟರ್ ನಲ್ಲೂ ಪರಿಶೀಲಿಸಿದ್ದರು. ಸ್ನಿಕೋ ಮೀಟರ್ ನಲ್ಲಿ ಚೆಂಡು ಸ್ಪರ್ಶಿಸಿದ ಸಿಗ್ನಲ್ ತೋರಿಸಿಯೇ ಇರಲಿಲ್ಲ. ಹಾಗಿದ್ದರೂ ಅಂಪಾಯರ್ ಗಳು ಔಟ್ ತೀರ್ಪು ನೀಡಿದ್ದರು.

ಇದು ಚೀಟಿಂಗ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೈಸ್ವಾಲ್ ವಿರುದ್ಧ ಆಸ್ಟ್ರೇಲಿಯಾ ಪರ ತೀರ್ಪು ನೀಡಿರುವ ಅಂಪಾಯರ್ ಗಳು ಮೋಸ ಮಾಡಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಪಾಯರ್ ಗಳು ಆಸ್ಟ್ರೇಲಿಯಾ ಪರ ಇದ್ದಾರೆ, ಭಾರತಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ