ಗೌತಮ್ ಗಂಭೀರ್ ಕೋಚ್ ಆದರೆ ಕೆಎಲ್ ರಾಹುಲ್ ಗೆ ಅದೃಷ್ಟ ಖುಲಾಯಿಸುತ್ತಾ
ಕೆಎಲ್ ರಾಹುಲ್ ಮತ್ತು ಗೌತಮ್ ಗಂಭೀರ್ ಈಗಾಗಲೇ ಐಪಿಎಲ್ ನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ರಾಹುಲ್ ಕೋಚ್ ಆಗಿದ್ದರೆ ಗಂಭೀರ್ ಮೆಂಟರ್ ಆಗಿದ್ದರು. ಇವರಿಬ್ಬರು ಎರಡು ಋತುವಿನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.
ಇದೀಗ ಕೆಎಲ್ ರಾಹುಲ್ ಟೀಂ ಇಂಡಿಯಾದಿಂದ ಕಿರು ಮಾದರಿ ಕ್ರಿಕೆಟ್ ನಲ್ಲಿ ಕಡೆಗಣಿಸಲ್ಪಟ್ಟಿದ್ದಾರೆ. ಮುಂದೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರಾಹುಲ್ ನಾಯಕರಾಗಲಿದ್ದಾರೆ ಎಂಬ ಮಾತುಗಳಿವೆ. ಈ ಸರಣಿಗೆ ರೋಹಿತ್ ಶರ್ಮಾ ಗೈರಾಗುವ ಸಾಧ್ಯತೆಯಿದೆ. ವಿಶೇಷವೆಂದರೆ ಗಂಭೀರ್ ಗೂ ಟೀಂ ಇಂಡಿಯಾ ಕೋಚ್ ಆಗಿ ಇದು ಮೊದಲ ಸರಣಿಯಾಗಲಿದೆ.
ಹೀಗಾಗಿ ಗಂಭೀರ್ ಗೆ ಮುಖ್ಯ ಕೋಚ್ ಆಗಿ ಮೊದಲ ಸರಣಿಯಲ್ಲೇ ರಾಹುಲ್ ಜೊತೆ ಕೆಲಸ ಮಾಡುವ ಅವಕಾಶ ಸಿಗುವ ಸಾಧ್ಯತೆಯಿದೆ. ರಾಹುಲ್ ಜೊತೆಗೆ ಉತ್ತಮ ಬಾಂಧವ್ಯವಿಟ್ಟುಕೊಂಡಿರುವ ಗಂಭೀರ್ ಮುಂದೆ ಅವರನ್ನೇ ಏಕದಿನ ತಂಡದ ನಾಯಕನಾಗಿ ಮಾಡಲು ಲಾಬಿ ನಡೆಸಬಹುದು ಎಂಬುದು ರಾಹುಲ್ ಅಭಿಮಾನಿಗಳ ವಿಶ್ವಾಸ. ಹೀಗಾಗಿ ಗಂಭೀರ್ ಬಂದರೆ ರಾಹುಲ್ ಗೆ ಲಾಭ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ.