ಕೊಹ್ಲಿ-ರೋಹಿತ್ ಮೊದಲ ಎರಡು ಏಕದಿನದಲ್ಲಿ ಯಾಕೆ ಆಡುತ್ತಿಲ್ಲ? ರಾಹುಲ್ ದ್ರಾವಿಡ್ ಸ್ಪಷ್ಟನೆ

ಶುಕ್ರವಾರ, 22 ಸೆಪ್ಟಂಬರ್ 2023 (09:42 IST)
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ಇಂದಿನಿಂದ ಆರಂಭವಾಗುತ್ತಿರುವ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಖಾಯಂ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಡುತ್ತಿಲ್ಲ.

ಈ ಬಗ್ಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಶ್ವಕಪ್ ಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಒಂದು ವೇಳೆ ಕೊಹ್ಲಿ-ರೋಹಿತ್ ಭಾಗಿಯಾಗಿದ್ದರೆ ಅವರಿಗೆ ಅಭ್ಯಾಸ ಸಿಕ್ಕಂತಾಗುತ್ತಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ದ್ರಾವಿಡ್ ‘ರೋಹಿತ್, ಕೊಹ್ಲಿ ತಂಡದ ಹಿರಿಯ ಆಟಗಾರರು. ಅವರಿಗೆ ವಿಶ್ವಕಪ್ ಗೆ ಹೇಗೆ ತಯಾರಾಗಬೇಕು ಎಂದು ಚೆನ್ನಾಗಿ ಗೊತ್ತಿದೆ. ವಿಶ್ವಕಪ್ ನ ಮೊದಲ ಪಂದ್ಯಕ್ಕೆ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ತಯಾರಾಗಲು ಸಮಯ ನೀಡಬೇಕಿತ್ತು. ಹೀಗಾಗಿ ಮೊದಲ ಎರಡು ಏಕದಿನ ಪಂದ್ಯಗಳಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ’ ಎಂದು ದ್ರಾವಿಡ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ