ಟೀಂ ಇಂಡಿಯಾ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ: ಜಾಹೀರಾತುದಾರರಿಗೆ ಖುಷಿಯೋ ಖುಷಿ
ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಿದ್ದು, ಇಂಗ್ಲೆಂಡ್ ವಿರುದ್ಧ ಗೆದ್ದರೆ ಫೈನಲ್ ಆಡಲಿದೆ. ಫೈನಲ್ ನಲ್ಲಿ ಒಂದು ವೇಳೆ ಪಾಕಿಸ್ತಾನ ಎದುರಾಳಿಯಾದರಂತೂ ಮುಗಿದೇ ಹೋಯ್ತು. ಜಾಹೀರಾತುದಾರರಿಗೆ, ಆಯೋಜಕರಿಗೆ ಭರ್ಜರಿ ಲಾಭ.
ಟಿವಿ ಜಾಹೀರಾತು ಬೆಲೆ 10 ಸೆಕೆಂಡಿಗೆ 15 ರಿಂದ 18 ಲಕ್ಷ ರೂ.ಗಳವರೆಗೆ ತಲುಪುತ್ತದೆ. ಹೀಗಾಗಿ ಭಾರತ-ಪಾಕಿಸ್ತಾನ ಫೈನಲ್ ಗೆ ಬರಲಿ ಎಂದು ಜಾಹೀರಾತುದಾರರು ಪ್ರಾರ್ಥಿಸುತ್ತಿದ್ದಾರೆ.