ನ್ಯೂಯಾರ್ಕ್ ಹೋಟೆಲ್ ನಲ್ಲಿ ಏನೂ ಇಲ್ಲ, ಹೊರಗಡೆ ಕಾಲಿಟ್ಟ ಟೀಂ ಇಂಡಿಯಾ

Krishnaveni K

ಬುಧವಾರ, 12 ಜೂನ್ 2024 (11:25 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ಆಡಲು ನ್ಯೂಯಾರ್ಕ್ ಗೆ ಬಂದಿಳಿದಾಗಿನಿಂದ ಟೀಂ ಇಂಡಿಯಾ ಇಲ್ಲಿ ನೀಡಲಾಗಿರುವ ಸೌಲಭ್ಯಗಳ ಕುರಿತು ಅಸಮಾಧಾನ ಹೊರ ಹಾಕುತ್ತಲೇ ಇದೆ. ಇದೀಗ ಟೀಂ ಇಂಡಿಯಾ ಹೋಟೆಲ್ ಒಳಗೆ ವ್ಯವಸ್ಥೆ ಇಲ್ಲವೆಂದು ಹೊರಗೆ ಕಾಲಿಟ್ಟಿದೆ.

ಟೀಂ ಇಂಡಿಯಾಗೆ ನ್ಯೂಯಾರ್ಕ್ ನಲ್ಲಿ ಕಾಲಿಟ್ಟಾಗ ಅಭ್ಯಾಸ ಮಾಡಲು ನೀಡಲಾಗಿದ್ದ ಮೈದಾನ ನೋಡಿದರೆ ಪಾರ್ಕ್ ರೀತಿ ಇದೆ ಎಂದು ಹಲವರು ಟೀಕಿಸಿದ್ದರು. ಈ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಕೂಡಾ ಅಸಮಾಧಾನ ಹೊರಹಾಕಿದ್ದರು. ಬಿಸಿಸಿಐ ಅನಧಿಕೃತವಾಗಿ ಐಸಿಸಿಗೆ ದೂರು ನೀಡಲಾಗಿದೆ ಎನ್ನಲಾಗಿತ್ತು.

ಇದೀಗ ಟೀಂ ಇಂಡಿಯಾ ಉಳಿದುಕೊಂಡಿರುವ ಹೋಟೆಲ್ ಒಳಗೆ ಆಟಗಾರರಿಗೆ ದೈಹಿಕ ಕಸರತ್ತು ನಡೆಸಲು ಸೂಕ್ತ ಜಿಮ್ ವ್ಯವಸ್ಥೆಯನ್ನೂ ಮಾಡಲಾಗಿಲ್ಲ. ಹೀಗಾಗಿ ಟೀಂ ಇಂಡಿಯಾ ಆಟಗಾರರು ಹೊರಗಿನ ಜಿಮ್ ನಲ್ಲಿ ಸದಸ್ಯತ್ವ ಪಡೆಯುವ ಅನಿವಾರ್ಯ ಸ್ಥಿತಿಗೆ ತಲುಪಿದ್ದಾರೆ.

ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಎಲ್ಲಾ ಆಟಗಾರರೂ ಫಿಟ್ನೆಸ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಹೋಟೆಲ್ ಒಳಗಿನ ಜಿಮ್ ವ್ಯವಸ್ಥೆ ಸರಿಯಾಗಿಲ್ಲವೆಂದು ಈಗ ಬಿಸಿಸಿಐ ಹೆಚ್ಚಿನ ಹಣ ಪಾವತಿ ಮಾಡಿ ಹೊರಗಿನ ಜಿಮ್ ನಲ್ಲಿ ಆಟಗಾರರಿಗೆ ಕಸರತ್ತು ನಡೆಸಲು ಅವಕಾಶ ಮಾಡಿಕೊಡುತ್ತಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ