ಟಿ20 ವಿಶ್ವಕಪ್ ಗೆ ತೆರಳಲಿದೆ ಟೀಂ ಇಂಡಿಯಾ ‘ಜಂಬೋ’ ತಂಡ

ಬುಧವಾರ, 8 ಸೆಪ್ಟಂಬರ್ 2021 (09:50 IST)
ಮುಂಬೈ: ಈ ಬಾರಿ ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೂಟಕ್ಕೆ ಭಾರತ ಬಹು ಸದಸ್ಯರನ್ನೊಳಗೊಂಡ ‘ಜಂಬೋ’ ತಂಡವನ್ನೇ ರವಾನಿಸಲಿದೆ.


ಕಳೆದ ಆವೃತ್ತಿಯಲ್ಲಿ ಐಸಿಸಿ ಒಂದು ತಂಡದಲ್ಲಿ ಸಹಾಯಕ ಸಿಬ್ಬಂದಿಗಳು ಸೇರಿ ಗರಿಷ್ಠ 23 ಸದಸ್ಯರನ್ನು ಒಳಗೊಳ್ಳಲು ಅವಕಾಶ ನೀಡಿತ್ತು. ಆದರೆ ಈ ಬಾರಿ ಕೊರೋನಾ ಕಾರಣಕ್ಕೆ ಕ್ವಾರಂಟೈನ್ ನಿಯಮಕ್ಕೊಳಪಡಬೇಕಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ 30 ಸದಸ್ಯರಿಗೆ ಅವಕಾಶ ನೀಡುತ್ತಿದೆ.

ಇಂದು ಅಥವಾ ನಾಳೆ ಬಿಸಿಸಿಐ ಟಿ20 ವಿಶ್ವಕಪ್ ಗೆ ತಂಡ ಪ್ರಕಟಿಸಲಿದ್ದು, ಭಾರತ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ