ಡಬ್ಲ್ಯುಪಿಎಲ್: ಶಫಾಲಿ, ಲ್ಯಾನಿಂಗ್ ಬ್ಯಾಟಿಂಗ್ ಅಬ್ಬರಕ್ಕೆ ಆರ್ ಸಿಬಿ ಕಂಗಾಲು
ಟಾಸ್ ಗೆದ್ದರೂ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ದೊಡ್ಡ ಹೊಡೆತ ಅನುಭವಿಸಿದರು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ ವರ್ಮ ಮತ್ತು ನಾಯಕಿ ಮೆಗ್ ಲ್ಯಾನಿಂಗ್ ಪ್ರಚಂಡ ಬ್ಯಾಟಿಂಗ್ ನಡೆಸಿದರು. ಈ ಜೋಡಿ 14.3 ಓವರ್ ಗಳಲ್ಲಿ 162 ಜೊತೆಯಾಟವಾಡಿ ಬೇರ್ಪಟ್ಟಿತು. ಲ್ಯಾನಿಂಗ್ 43 ಎಸೆತಗಳಿಂದ 72 ರನ್ ಗಳಿಸಿ ಮೊದಲನೆಯವರಾಗಿ ಔಟಾದರೆ ಅವರ ಬೆನ್ನಲ್ಲೇ ಶಫಾಲಿ45 ಎಸೆತಗಳಿಂದ 84 ರನ್ ಗಳಿಸಿ ಔಟಾದರು.
ಇವರಿಬ್ಬರೂ ಔಟಾದ ಬಳಿಕ ಮರಿಝೈನ್ ಕಪ್ ರನ್ ಗತಿ ಹೆಚ್ಚಿಸುವ ಜವಾಬ್ಧಾರಿ ವಹಿಸಿಕೊಂಡರು. ಅವರು 17 ಎಸೆತಗಳಿಂದ ಅಜೇಯ 39 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಬಂದ ಜೆಮಿಮಾ ರೊಡ್ರಿಗಸ್ 15 ಎಸೆತಗಳಿಂದ 22 ರನ್ ಗಳಿಸಿ ಔಟಾಗದೇ ಉಳಿದರು. ಇದೀಗ ಆರ್ ಸಿಬಿಗೆ ಗೆಲ್ಲಲು ಕಠಿಣ ಪರಿಶ್ರಮ ಪಡಬೇಕಾಗಿದೆ.