ಡಬ್ಲ್ಯುಪಿಎಲ್: ಶಫಾಲಿ ವರ್ಮ ಸ್ಪೋಟಕ ಬ್ಯಾಟಿಂಗ್ ಗೆ ಬೆಚ್ಚಿಬಿದ್ದ ಫ್ಯಾನ್ಸ್
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು. ಡೆಲ್ಲಿ ಪರ ಬೌಲಿಂಗ್ ನಲ್ಲಿ ಮರಿಝೈನ್ ಕಪ್ 5 ವಿಕೆಟ್ ಕಬಳಿಸಿದರು.
ಈ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಸ್ಪೋಟಕ ಆರಂಭ ನೀಡಿದವರು ಶಫಾಲಿ ವರ್ಮ. ಕೇವಲ 5 ಓವರ್ ಕಳೆಯುವಷ್ಟರಲ್ಲಿ ತಂಡದ ಮೊತ್ತ 70 ರನ್ ದಾಟಿತ್ತು! ಕೇವಲ 28 ಎಸೆತಗಳಿಂದ 10 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 76 ರನ್ ಚಚ್ಚಿದ ಶಫಾಲಿ ವರ್ಮಗೆ ನಾಯಕಿ ಮೆಗ್ ಲ್ಯಾನಿಂಗ್ 21 ರನ್ ಗಳಿಸಿ ಸಾಥ್ ನೀಡಿದರು. ಇದರಿಂದಾಗಿ ಡೆಲ್ಲಿ 7.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 107 ರನ್ ಗಳಿಸಿ ಗುರಿ ತಲುಪಿತು. ಶಫಾಲಿ ವರ್ಮ ಬಿರುಗಾಳಿಯಂತಹ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳೇ ಬೆರಗಾಗುವಂತೆ ಮಾಡಿತು. ಇದರೊಂದಿಗೆ ಡೆಲ್ಲಿ 10 ವಿಕೆಟ್ ಗಳ ಗೆಲುವು ಪಡೆಯಿತು.