ಕಾಮನ್ ವೆಲ್ತ್ ನಲ್ಲಿ ಕಂಚು ಗೆದ್ದ ಪತ್ನಿ ದೀಪಿಕಾ ಬಗ್ಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೇಳಿದ್ದು ಹೀಗೆ!
ದೀಪಿಕಾ ಮತ್ತು ಸೌರವ್ ಘೋಷಾಲ್ ಜೋಡಿ ನಿನ್ನೆ ಕಂಚಿನ ಪದಕಕ್ಕಾಗಿ ನಡೆದ ಪಂದ್ಯ ಗೆದ್ದುಕೊಂಡಿತ್ತು. ಪತ್ನಿಯ ಸಾಧನೆ ಬಗ್ಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೆಮ್ಮೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮಿಬ್ಬರ ಪ್ರಯತ್ನ, ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ ಎಂದು ದಿನೇಶ್ ಕಾರ್ತಿಕ್ ಪತ್ನಿ ದೀಪಿಕಾ ಮತ್ತು ಸೌರವ್ ಘೋಷಾಲ್ ಗೆ ಅಭಿನಂದಿಸಿದ್ದಾರೆ.