98 ವರ್ಷಗಳ ಹಳೆಯ ದಾಖಲೆ ಮುರಿಯುವ ಅಪರೂಪದ ಅವಕಾಶ ಮಿಸ್ ಮಾಡಿಕೊಂಡ ಕೆಎಲ್ ರಾಹುಲ್!

Webdunia
ಮಂಗಳವಾರ, 11 ಸೆಪ್ಟಂಬರ್ 2018 (09:21 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ 98 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿಯುವ ಅವಕಾಶವನ್ನು ಕೆಎಲ್ ರಾಹುಲ್ ಮಿಸ್ ಮಾಡಿಕೊಂಡಿದ್ದಾರೆ.

ಈಗಾಗಲೇ ಸರಣಿಯಲ್ಲಿ 13 ಕ್ಯಾಚ್ ಪಡೆದು ರಾಹುಲ್ ದ್ರಾವಿಡ್ ರ ಒಂದೇ ಸರಣಿಯಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ದಾಖಲೆಯನ್ನು ರಾಹುಲ್ ಮುರಿದಿದ್ದಾರೆ. ಇನ್ನು ಮೂರು ಕ್ಯಾಚ್ ಪಡೆದರೆ ಅವರು ಇನ್ನೊಂದು ದಾಖಲೆ ಮಾಡಲಿದ್ದರು.

ಆದರೆ ಇಂಗ್ಲೆಂಡ್ ನಿನ್ನೆ 6 ವಿಕೆಟ್ ಕಳೆದುಕೊಂಡರೂ ರಾಹುಲ್ ಗೆ ಮತ್ತೆ ಒಂದೇ ಒಂದು ಕ್ಯಾಚ್ ಪಡೆಯಲು ಸಾಧ್ಯವಾಯಿತು. ಹೀಗಾಗಿ ಒಂದೇ ಸರಣಿಯಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ವಿಶ್ವ ದಾಖಲೆ ಬರೆಯುವ ಅವಕಾಶ ಕಳೆದುಕೊಂಡರು. ಈಗ ರಾಹುಲ್ ಈ ಸರಣಿಯಲ್ಲಿ ಹಿಡಿದ ಕ್ಯಾಚ್ ಗಳ ಸಂಖ್ಯೆ 14 ಕ್ಕೆ ತಲುಪಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಜ್ಯಾಕ್ ಗ್ರೆಗೊರಿ 1920-21 ರ ಆಶಸ್ ಸರಣಿಯಲ್ಲಿ 15 ಕ್ಯಾಚ್ ಪಡೆದು ವಿಶ್ವ ದಾಖಲೆ ಬರೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              

ಸಂಬಂಧಿಸಿದ ಸುದ್ದಿ

Next Article