ಮುಟ್ಟಿನ ದಿನಗಳ ಸೆಕ್ಸ್ ನಿಂದ ಗರ್ಭಿಣಿಯಾಗುವ ಸಾಧ್ಯತೆಯಿದೆಯೇ?!

ಬುಧವಾರ, 7 ಫೆಬ್ರವರಿ 2018 (08:26 IST)
ಬೆಂಗಳೂರು: ಸಾಮಾನ್ಯವಾಗಿ ಅಂಡಾಣು ಬಿಡುಗಡೆಯಾಗುವ ಹಂತದಲ್ಲಿ ಸೆಕ್ಸ್ ನಡೆಸಿದರಷ್ಟೇ ಗರ್ಭಿಣಿಯಾಗಬಹುದು ಎಂದು ನಾವೆಲ್ಲಾ ತಿಳಿದುಕೊಂಡಿರುತ್ತೇವೆ.  ಆದರೆ ಮುಟ್ಟಿನ ದಿನಗಳಲ್ಲಿ ಸೆಕ್ಸ್ ನಡೆಸಿದರೆ ಏನಾಗುತ್ತದೆ?
 

ಮುಟ್ಟಿನ ದಿನಗಳಲ್ಲಿ ಸೆಕ್ಸ್ ನಡೆಸಿದರೆ ಪ್ರೆಗ್ನೆನ್ಸಿ ಚಾನ್ಸ್ ಇದೆಯಾ? ನಮ್ಮ ಸಾಮಾನ್ಯ ನಂಬಿಕೆಯೆಂದರೆ ಇಲ್ಲ. ಮಹಿಳೆಗೆ ಮುಟ್ಟಿನ ದಿನ ಕಳೆದು ಅಂಡಾಣು ಬಿಡುಗಡೆ ಸಂದರ್ಭ ವೀರ್ಯಾಣು ಗರ್ಭಾಶಯ ಪ್ರವೇಶಿಸಿದರೆ ಪ್ರೆಗ್ನೆನ್ಸಿ ಛಾನ್ಸ್ ಇರುತ್ತದೆ.

ಮಹಿಳೆಯ ಋತು ಚಕ್ರದ ಅವಧಿ 28 ರಿಂದ 30 ದಿನಗಳು. ಹಾಗಿದ್ದರೂ ಮಹಿಳೆಯಿಂದ ಮಹಿಳೆಗೆ ವ್ಯತ್ಯಸ್ತವಾಗಿರುತ್ತದೆ. ಪುರುಷರ ವೀರ್ಯಾಣು ಮಹಿಳೆಯ ಗರ್ಭಾಶಯದೊಳಗೆ ಗರಿಷ್ಠ72 ಗಂಟೆ ಜೀವಿಸಬಲ್ಲದು. ಹೀಗಾಗಿ ಮುಟ್ಟಿನ ಕೊನೆ ದಿನಗಳಲ್ಲಿ ಸಮಾಗಮ ನಡೆಸುವುದರಿಂದ ಗರ್ಭಿಣಿಯಾಗುವ ಸಾಧ್ಯತೆ ತಳ್ಳಿ ಹಾಕಲಾಗದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ