ಚಿಯಾ ಬೀಜಗಳನ್ನು ಸೇವಿಸಿದರೆ ಎಷ್ಟೊಂದು ಲಾಭವಾಗುತ್ತದೆ ಗೊತ್ತಾ

Krishnaveni K

ಶುಕ್ರವಾರ, 14 ಜೂನ್ 2024 (11:59 IST)
Photo Credit: X
ಬೆಂಗಳೂರು: ಕೆಲವೊಂದು ಆಹಾರ ವಸ್ತುಗಳು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಿರುತ್ತದೆ. ಚಿಯಾ ಬೀಜಗಳ ವಿಚಾರದಲ್ಲೂ ಹೀಗೆಯೇ. ಈ ಒಂದು ಧಾನ್ಯ ಸೇವಿಸುವುದರಿಂದ ನಮಗೆ ಎಷ್ಟೆಲ್ಲಾ ಲಾಭ ಸಿಗುತ್ತದೆ ತಿಳಿದುಕೊಳ್ಳಿ.

ಚಿಯಾ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲ, ಆಂಟಿ ಆಕ್ಸಿಡೆಂಟ್ ಗಳು, ಫೈಬರ್ ಅಂಶ ಹೇರಳವಾಗಿದೆ. ಮೀನು ಸೇವಿಸಲಾಗದ ಸಸ್ಯಾಹಾರಿಗಳು ಅದರ ಪರ್ಯಾಯವಾಗಿ ಚಿಯಾ ಬೀಜಗಳನ್ನು ಬಳಸಬಹುದಾಗಿದೆ.

ಚಿಯಾ ಬೀಜಗಳು ಪ್ರಮುಖವಾಗಿ ಮಹಿಳೆಯರಿಗೆ ಕೂದಲು ಬೆಳವಣಿಗೆಗೆ ಸಹಕರಿಸುತ್ತದೆ. ಅಲ್ಲದೆ ತೂಕ ಕಡಿಮೆ ಮಾಡಲು ಬಯಸುವವರು ಇದನ್ನು ಹೇರಳವಾಗಿ ಸೇವಿಸಿದರೆ ತೂಕ ನಿಯಂತ್ರಣದಲ್ಲಿರುತ್ತದೆ ಹಾಗೂ ಬೊಜ್ಜು ಬೆಳೆಯದಂತೆ ನೋಡಿಕೊಳ್ಳುತ್ತದೆ.

ಒಮೆಗಾ ಕೊಬ್ಬಿನಾಮ್ಲ ಇರುವ ಕಾರಣಕ್ಕೆ ಹೃದಯದ ಆರೋಗ್ಯವನ್ನೂ ಸಂರಕ್ಷಿಸುತ್ತದೆ. ಫೈಬರ್ ಅಂಶವೂ ಹೇರಳವಾಗಿದ್ದು ರಕ್ತದೊತ್ತಡ, ಕೊಲೆಸ್ಟ್ರಾಲ್ ನ್ನೂ ನಿಯಂತ್ರಿಸುವ ಗುಣ ಹೊಂದಿದೆ. ಹೀಗಾಗಿ ಚಿಯಾ ಬೀಜಗಳನ್ನು ನಿಮ್ಮ ಪ್ರತಿನಿತ್ಯದ ಡಯಟ್ ನಲ್ಲಿ ಸೇರಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ