ನಿಮಗೆ ಹಳೆಯ ನೋವುಗಳು ಕಾಡುತ್ತಿದ್ದರೆ ಈ ಮನೆಮದ್ದನ್ನು ಸೇವಿಸಿ
ಸೋಮವಾರ, 13 ಏಪ್ರಿಲ್ 2020 (07:10 IST)
ಬೆಂಗಳೂರು : ಬೆನ್ನು ನೋವು, ಸೊಂಟ ನೋವು, ಕುತ್ತಿಗೆ ನೋವು ಇದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಹಳೆಯ ನೋವುಗಳು ನಮ್ಮನ್ನ ಕಾಡುತ್ತಿರುತ್ತದೆ.
200 ಗ್ರಾಂ ಮೆಂತ್ಯ, 100 ಗ್ರಾಂ ಜೀರಿಗೆ, 25 ಕಾಳು ಮೆಣಸು ಮೂರನ್ನು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ. ನಂತರ 1 ಗ್ಲಾಸ್ ಬಿಸಿ ನೀರಿಗೆ 1ಚಮಚ ಈ ಪುಡಿ ಹಾಗೂ ಕೆಂಪು ಕಲ್ಲುಸಕ್ಕರೆ ಹಾಕಿ ಕುಡಿಯಿರಿ, ಇದನ್ನು ದಿನಕ್ಕೆ 2 ಬಾರಿ ಕುಡಿಯಬೇಕು. ಹೀಗೆ ಮಾಡುತ್ತಾ ಬಂದರೆ ಎಷ್ಟೇ ಹಳೆಯದಾದ ನೋವಿದ್ದರೂ ಬೇಗನೆ ವಾಸಿಯಾಗುತ್ತದೆ.