ಭಾರತಕ್ಕೆ ಪಾಕ್ ಪ್ರಧಾನಿ ಬೆದರಿಕೆ

ಗುರುವಾರ, 21 ಸೆಪ್ಟಂಬರ್ 2017 (09:17 IST)
ಕರಾಚಿ: ವಿಶ್ವಸಂಸ್ಥೆಯಲ್ಲಿ ಸುಷ್ಮಾ ಸ್ವರಾಜ್ ಪಾಕ್ ಗೆ ಚಾಟಿ ಬೀಸಿರುವ ಬೆನ್ನಲ್ಲೇ ಪಾಕ್ ಪ್ರಧಾನಿ ಶಾಹಿದ್ ಕಖಾನ್ ಅಬ್ಬಾಸಿ ಭಾರತಕ್ಕೆ ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ್ದಾರೆ.


ಭಾರತದ ಸೇನೆಯನ್ನು ನಿರ್ನಾಮ ಮಾಡಬಲ್ಲ ಸಣ್ಣ ಶ್ರೇಣಿಯ ಅಣ್ವಸ್ತ್ರಗಳು ಸಾಕಷ್ಟಿವೆ. ಅಗತ್ಯ ಬಂದರೆ ಬಳಸಲು ಹಿಂದೇಟು ಹಾಕುವುದಿಲ್ಲ ಎಂದು ಅಬ್ಬಾಸಿ ಬೆದರಿಕೆ ಹಾಕಿದ್ದಾರೆ. ಭಾರತ ಆರಂಭಿಸಿದ ಶೀತಲ ಯುದ್ಧಕ್ಕೆ ಪ್ರತಿಯಾಗಿ ನಾವು ನಮ್ಮ ಸುರಕ್ಷತೆಗಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿದ್ದೇವೆ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.

ಉತ್ತರ ಕೊರಿಯಾ ಅಮೆರಿಕಾಕ್ಕೆ ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ ಬೆನ್ನಲ್ಲೇ ಪಾಕ್ ಪ್ರಧಾನಿಯೂ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗದ ಎಚ್ಚರಿಕೆ ನೀಡಿದ್ದಾರೆ. ದಿನೇ ದಿನೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪಾಗುತ್ತಿರುವ ಪಾಕ್ ಇದೀಗ ಸೇಡಿಗಾಗಿ ಕಾಯುತ್ತಿದೆ.

ಇದನ್ನೂ ಓದಿ…  ಸ್ಟೀವ್ ಸ್ಮಿತ್ ಗಿಂದು 100 ನೇ ಏಕದಿನ ಪಂದ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ