ರಶ್ಮಿಕಾ-ವಿಜಯ್ ದೇವರಕೊಂಡ ಬ್ರೇಕ್ ಅಪ್ ಆಗಿ ಎರಡು ವರ್ಷ ಆಯ್ತು!
ಇದಕ್ಕೆ ಸಾಕ್ಷಿಯೆಂಬಂತೆ ಇಬ್ಬರೂ ಜೊತೆ ಜೊತೆಯಾಗಿ ಓಡಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಇದೀಗ ಅವರಿಬ್ಬರ ರಿಲೇಷನ್ ಶಿಪ್ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ರಶ್ಮಿಕಾ-ವಿಜಯ್ ಡೇಟಿಂಗ್ ಮಾಡುತ್ತಿದ್ದುದು ನಿಜ. ಆದರೆ ಈಗ ಇಬ್ಬರೂ ಬ್ರೇಕ್ ಅಪ್ ಆಗಿದ್ದಾರೆ. ಬ್ರೇಕ್ ಅಪ್ ಆಗಿ ಆಗಲೇ ಎರಡು ವರ್ಷವಾಗಿದೆ ಎಂದು ಮಾಧ‍್ಯಮ ವರದಿ ಹೇಳಿದೆ. ರಶ್ಮಿಕಾ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದರೆ ವಿಜಯ್ ದೇವರಕೊಂಡ ಕೂಡಾ ಲೈಗರ್ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದ್ದಾರೆ. ಹಾಗಿದ್ದರೂ ಇಬ್ಬರೂ ತಮ್ಮ ಸ್ನೇಹ ಸಂಬಂಧ ಮಾತ್ರ ಮೊದಲಿನಂತೆಯೇ ಮುಂದುವರಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.