ರಾಜ್ಯದ ಎಲ್ಲಾ ನೀರಾವರಿ ವ್ಯಾಜ್ಯಗಳ ಕುರಿತು ಸಭೆಯಲ್ಲಿ ಚರ್ಚೆ

ಮಂಗಳವಾರ, 22 ಆಗಸ್ಟ್ 2023 (19:45 IST)
ರಾಜ್ಯದಲ್ಲಿ ವಾಡಿಕೆಗಿಂತ ಈ ಭಾರಿ ಮಳೆ ಆಗಿಲ್ಲ.ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.ಹಲವು ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ಕಡಿಮೆ ಇದೆ ಅದರಲ್ಲಿ ಕೆ ಆರ್ ಎಸ್ ಕೂಡಾ ಹೌದು.ಒಟ್ಟು ಕೆ ಆರ್ ಎಸ್ ಅಣೆಕಟ್ಟು ಪ್ರದೇಶಕ್ಕೆ ಬೇಕಾಗುವ ನೀರು 124 ಟಿಎಂಸಿ ಇಗಿರುವುದು ಕೇವಲ 55 ಟಿಎಂಸಿ ಹೀಗಿರುವಾಗಲೂ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ಕ್ಯಾತೆ ತೆಗೆದು ನ್ಯಾಯಲದ ಮೊರೆ ಹೋಗಿದೆ.ಈಗಾಲೇ ಕೆ ಆರ್ ಎಸ್ ನಿಂದ ನೀರು ಬಿಡಲಾಗುತ್ತಿದೆ.ಇದರಿಂದ ಮಂಡ್ಯ,ಮೈಸೂರು ಭಾಗದ ರೈತರು,ಹಾಗೂ ವಿಪಕ್ಷಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿವೆ.

ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸುವುದನ್ನ ವಿಪಕ್ಷಗಳು,ರೈತರು ವಿರೋಧಿಸಿದ್ದಾರೆ.ಈ ಹಿನ್ನಲೆ ನಾಳೆ ಸಿಎಂ ಸಿದ್ದರಾಮಯ್ಯ ಸರ್ವ ಪಕ್ಷಸಭೆ ಕರೆದಿದ್ದಾರೆ.ಮಾಜಿ ಸಿಎಂ ಬೊಮ್ಮಾಯಿ,ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರಿಗೆ ಸರ್ಕಾರ ಈಗಾಗಲೇ ಸಭೆ ಬರುವಂತೆ ಆಹ್ವಾನ ನೀಡಿದೆ. ಸರ್ವ ಪಕ್ಷದ ಸಭೆ ಕುರಿತಾಗಿ ಮಾತನಾಡಿದ ಮಾಜಿ ಸಚಿವ ಆರ್ ಅಶೋಕ್ ಕೊನೆಗೂ ಸಭೆ ಕರೆದಿದ್ದಾರೆ. ಸ್ಟಾಲಿನ್ ಜೊತೆಗೆ ಒಳ ಒಪ್ಪಂದ ಇದು.ನೀರು ಬಿಟ್ಟ ಮೇಲೆ ಸಭೆ ಕರೆದಿದ್ದಾರೆ. ಒಳ ಒಪ್ಪಂದ ಮಾಡಿಕೊಂಡಿದ್ದಾರೆ.ಮೇಕೆ ದಾಟು ಅಂದ್ರು. ಅಧಿಕಾರ ಬಂದ ಮೇಲೆ ಕಾವೇರಿನೂ ಇಲ್ಲ ಮೇಕೆದಾಟು ಇಲ್ಲ.ನೀರು ಬಿಟ್ಟು ಕರ್ನಾಟಕದ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ