ಬಿಜೆಪಿ ತೆಕ್ಕೆಯಿಂದ ಬೀದರ್‌ನ್ನು ʼಕೈ ʼ ವಶಮಾಡಿಕೊಂಡ ಕಿರಿಯ ಸಂಸದ ಸಾಗರ್‌ ಖಂಡ್ರೆ

sampriya

ಮಂಗಳವಾರ, 4 ಜೂನ್ 2024 (16:48 IST)
Photo By X
ಬೆಂಗಳೂರು:  ಅತೀ ಚಿಕ್ಕ ವಯಸ್ಸಿನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಸಚಿವ ಈಶ್ವರ್‌ ಖಂಡ್ರೆ ಅವರ ಪುತ್ರ ಸಾಗರ್‌ ಖಂಡ್ರೆ ಅವರು ಬೀದರ್‌ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿದ್ದಾರೆ.

ಈ ಮೂಲಕ ದೇಶದ ಕಿರಿಯ ಸಂಸದ ಎಂಬ ಹೆಗ್ಗಳಿಕೆಯೊಂದಿಗೆ 26ನೇ ವಯಸ್ಸಿನ ಸಾಗರ್‌ ಖಂಡ್ರೆ ಅವರು ಸಂಸತ್ತು ಪ್ರವೇಶಿಸುತ್ತಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಭಗವಂತ ಖೂಬಾ ವಿರುದ್ಧ ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಗೆಲುವಿನ ನಗೆ ಬೀರಿದ್ದಾರೆ.  ಬೀದರ್​ ಲೋಕಸಭಾ ಕ್ಷೇತ್ರದಲ್ಲಿ ಸಾಗರ ಖಂಡ್ರೆ ಗೆಲ್ಲುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ. ಈ ಮೂಲಕ ಮತ್ತೇ ಬೀದರ್‌ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಕೈ ಸೇರಿದೆ.

ಇನ್ನೂ ಸಾಗರ್‌ ಖಂಡ್ರೆ ಅವರು ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುತ್ತಿದ್ದ ಹಾಗೇ ವಿಪಕ್ಷ ನಾಯಕ ಆರ್‌.ಅಶೋಲ್‌ ಅವರು  ಅನುಭವ ಇಲ್ಲದ ಹುಡುಗ ಎಂದು ಲೇವಾಡಿ ಮಾಡಿದ್ದರು. ಇದೀಗ  ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಾನು ಪ್ರಭುದ್ದನಾಗಿದ್ದೇನೆ ಎಂದು ಅಶೋಕ್ ಗೆ ತಿರುಗೇಟು ನೀಡಿದ್ದಾರೆ.









 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ