ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ ನಲ್ಲಿ ನ.10ರಂದು ನಡೆದಿತ್ತು.ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಶ್ವೇತಾ (27) ನೇಣಿಗೆ ಶರಣಾಗಿದ್ದು,ಪತಿ ಅಭಿಷೇಕ್ ವಿರುದ್ಧ ಮೃತಳ ಕುಟುಂಬಸ್ಥರ ಆರೋಪ ಮಾಡ್ತಿದ್ದಾರೆ.11 ತಿಂಗಳ ಹಿಂದಷ್ಟೇ ಇಬ್ಬರಿಗೂ ವಿವಾಹವಾಗಿತ್ತು.ಐಬಿಎಂ ಕಂಪನಿಯಲ್ಲಿ ಶ್ವೇತಾ ಉದ್ಯೋಗಿಯಾಗಿದ್ದಳು.ಅಭಿಷೇಕ್ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.ಮದುವೆಗೂ ಮುನ್ನ ಯುವತಿಯೊಬ್ಬಳೊಂದಿಗೆ ಸಂಬಂಧ ಹೊಂದಿದ್ದ .ಅಭಿಷೇಕ್ ಮದುವೆಯ ನಂತರ ಇದೇ ವಿಚಾರ ಗೊತ್ತಾಗಿ ದಂಪತಿ ನಡುವೆ ಜಗಳವಾಗಿತ್ತು.ಪರಸ್ಪರ ರಾಜಿ ಪಂಚಾಯತಿ ಬಳಿಕ ಇಬ್ಬರು ಒಟ್ಟಿಗೆ ಜೀವನ ಸಾಗಿಸುತ್ತಿದ್ದರು.ಈ ನಡುವೆ ಪುನಃ ತನ್ನ ಹಳೇ ಚಾಳಿ ಅಭಿಷೇಕ್ ಮುಂದುವರೆಸಿದ್ದ .ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದು,ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಬಂಧಿಸಲಾಗಿದೆ.