ತಿರುಪತಿಯ ಶ್ರೀನಿವಾಸನಿಗಿಂತಲೂ ಕುಬೇರ ಆಗ್ತಾನ ಅಯೋಧ್ಯೆ ರಾಮ...?

geetha

ಗುರುವಾರ, 8 ಫೆಬ್ರವರಿ 2024 (16:34 IST)
ಅಯೋಧ್ಯೆ-ಅಯೋಧ್ಯೆಯಲ್ಲಿ ಈಗ ಶ್ರೀಮಂತಿಕೆಯ ವೈಭವ ಮನೆ ಮಾಡ್ತಿದೆ. ಇಡೀ ಜಗತ್ತೆ ಇವತ್ತು ಅಯೋಧ್ಯೆಯ ಕಡೆಗೆ ನೋಡುತ್ತಿದೆ ಅದರಲ್ಲೂ ರಾಮಮಂದಿರ ಲೋಕಾರ್ಪಣೆ ಆದ ಬಳಿಕವಂತೂ ಇಲ್ಲಿನ ಅಸಲಿ ಚಿತ್ರಣವೇ ಬದಲಾಗಿ ಹೋಗಿದೆ.ರಾಮನೂರಿನಲ್ಲಿ ಪ್ರಧಾನಿ ಮೋದಿಯಿಂದ ರಾಮಮಂದಿರ ಉದ್ಘಾಟನೆ ಆದ ಬಳಿಕ ಸಾಗರೋಪಾದಿಯಲ್ಲಿ ಭಕ್ತಾಧಿಗಳು ಅಯೋಧ್ಯೆಯ ಕಡೆಗೆ ದಾಖಲೆಯ ಪ್ರಮಾಣದಲ್ಲಿ ಹೆಜ್ಜೆ ಹಾಕಿದ್ದರು. ನೂಕು ನುಗ್ಗಲು ಕೂಡ ಉಂಟಾಗಿತ್ತು ಅತ್ತಾ ನಿರೀಕ್ಷೆಯಂತೆ ಭಾರೀ ಭದ್ರತೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು.ಆದರೂ ಕೂಡ ಮಂದಿರ ಉದ್ಘಾಟನೆ ಆದ ಎರಡು ವಾರಗಳ ಬಳಿಕ ರಾಮನೂರಿನಲ್ಲಿ ಭಾರೀ ಪ್ರಮಾಣದಲ್ಲಿ ಕಾಣಿಕೆ ಹಣವು ಬಂದಿದೆ.

ಹಾಗಾದರೆ ಮಂದಿರ ಲೋಕಾರ್ಪಣೆ ಆದ ಬಳಿಕ ಇಲ್ಲಿಯತನಕ ಬಾಲರಾಮನದರ್ಶನ ಮಾಡಿದ ಭಕ್ತಾಧಿಗಳಿಂದ ಹುಂಡಿಗೆ ಬಿದ್ದ ಹಣವೆಷ್ಟು ಅಂತ ಕೇಳಿದರೇ ನಿಜಕ್ಕೂ ನೀವೇ ಶಾಕ್ ಆಗ್ತಾರಾ ಖಂಡಿತಾ.ಉತ್ತರಪ್ರದೇಶದ ಅಯೋಧ್ಯೆಯಲ್ಲಿ ೧೭ ದಿನಗಳ ಹಿಂದಷ್ಟೇ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಿ ರಾಮಮಂದಿರ ಉದ್ಘಾಟನೆಯಾಗಿತ್ತು. ಅಂದಿನಿAದ ಇಂದಿನವರೆಗೂ ೨೫ ಲಕ್ಷಕ್ಕೂ ಅಧಿಕ ಜನ ಭಕ್ತರು ರಾಮಲಲ್ಲಾ ದರ್ಶನಕ್ಕಾಗಿ ಬಂದಿದ್ದಾರೆ. ೧೧ ಕೋಟಿಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ ಇಲ್ಲಿಯತನಕ ಅನ್ನೋದು ಸದ್ಯದ ಮಾಹಿತಿ.

ಸುದೀರ್ಘ ಹೋರಾಟದ ಪರಿಣಾಮ ಬಾಲರಾಮನ ಪ್ರವೇಶ ರಾಮನೂರಿನಲ್ಲಿ ಆಗಿದೆ. ಬಹುಶಃ ಇಂತಹದೊAದು ಐತಿಹಾಸಿಕ ಕ್ಷಣಕ್ಕೆ ಪುಣ್ಯ ಭೂಮಿ ಅಯೋಧ್ಯೆಯೂ ಸಾಕ್ಷಿ ಆಗಿದ್ದೇ, ಇಲ್ಲಿನ ಅಸಲಿ ಚಿತ್ರಣವೇ ಬದಲಾಗಿ ಹೋಗಿದೆ... ಇಲ್ಲಿಗೆ ಬರುವ ಭಕ್ತರ ಸಂಖ್ಯೆಗೆ ಮಿತಿಯೇ ಇಲ್ಲದಂತಾಗಿದೆ. ಶ್ರೀಮಂತದ ವೈಭವ ಅಯೋಧ್ಯೆಯಲ್ಲಿ ಎದ್ದು ಕಾಣ್ತಿದೆ.ಜನವರಿ ೨೨ರಂದು ಪ್ರಧಾನಿ ಮೋದಿಯಿಂದ ರಾಮಮಂದಿರದಲ್ಲಿ ರಾಮಲಲ್ಲಾನಾ ಪ್ರಾಣಪ್ರತಿಷ್ಟಾಪನಾ ಸಮಾರಂಭ ಜರುಗಿದ ಬಳಿಕ, ಮರು ದಿನವೇ ಬಾಲರಾಮನ ದರ್ಶನಕ್ಕೆ ಮುಕ್ತ ಅವಕಾಶವನ್ನು ಮಾಡಿಕೊಡಲಾಗಿತ್ತು. 

ರಾಮಮಂದಿರವೂ ಕೋಟ್ಯಾಂತರ ರಾಮನ ಬಂಟರ ಆಹ್ವಾನಕ್ಕೆ ಮುಕ್ತವಾಗಿದೆ. ನೂರಾರು ವರ್ಷಗಳ ಕಾಯುವಿಗೆಯಿಂದ ಶ್ರೀ ರಾಮನ ದರ್ಶನವಿಲ್ಲದೇ ಕಂಗಾಲಾಗಿದ್ದ ರಾಮಭಕ್ತರಿಗೆ ರಾಮಲಲ್ಲಾನ ಕಾರ್ಯದ ಬಳಿಕ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಆದರೆ ಭಕ್ತಿ ಮುಂದೇ ಯಾವುದೂ, ಯಾರು ಕೂಡ ಕಾಣಲ್ಲ ಅನ್ನೋದಕ್ಕೆ, ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತ ಸಾಗರವೇ ನೈಜ ನಿದರ್ಶನವನ್ನು ಕಣ್ಣ ಮುಂದೇ ತಂದಿಟ್ಟಿದೆ.ಇಲ್ಲಿಯ ತನಕ ತಿಮ್ಮಪ್ಪ ಜಗತ್ತಿನ ಅತಿ ಶ್ರೀಮಂತ ದೇವರಾಗಿ ಕಂಗೊಳಿಸಿದ್ದ. ಆದರೆ ಇವಾಗ ರಾಮನಗರಿ ಅಯೋಧ್ಯೆಯೂ ಮಂದಿರ ನಿರ್ಮಾಣದ ನಂತರ ಶ್ರೀಮಂತಿಕೆಯ ಛಾಯೆಯನ್ನು ಆವರಿಸಿಕೊಳ್ಳುವ ಎಲ್ಲಾ ಲಕ್ಷಣಗಳನ್ನು ಎತ್ತಿ ತೋರಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ