ಇಂದು ಜೊಕೊವಿಕ್ ಗೆದ್ದರೆ ಅದೊಂದು ಇತಿಹಾಸವಾಗಲಿದೆ. ಒಂದೇ ಕ್ಯಾಲೆಂಡರ್ ಇಯರ್ ನಲ್ಲಿ ಆಸ್ಟ್ರೇಲಿಯಾ ಓಪನ್, ವಿಂಬಲ್ಡನ್ ಓಪನ್, ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್ ಗೆದ್ದ ವಿನೂತನ ದಾಖಲೆ ಅವರ ಪಾಲಾಗಲಿದೆ. ಈ ರೀತಿ ಮಾಡಿದ ಕೇವಲ ಎರಡನೇ ಟೆನಿಸ್ ಆಟಗಾರ ಎಂಬ ಕೀರ್ತಿಗೆ ಅವರು ಪಾತ್ರರಾಗಲಿದ್ದಾರೆ.
52 ವರ್ಷದ ಹಿಂದೆ ಒಂದೇ ವರ್ಷದ ಎಲ್ಲಾ ಗ್ರ್ಯಾಂಡ್ ಸ್ಲಾಂ ಟೂರ್ನಿಗಳನ್ನು ಗೆದ್ದ ದಾಖಲೆಯನ್ನು ರಾಡ್ ಲೆವರ್ ಮಾಡಿದ್ದರು. ಅದಾದ ಬಳಿಕ ಈಗ ಜೊಕೋವಿಕ್ ಗೆ ಆ ಅವಕಾಶವಿದೆ. ಅದಲ್ಲದೆ, ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಂ ಟೂರ್ನಿಗಳನ್ನು ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಜೊಕೊವಿಕ್ ಪಾಲಾಗಲಿದೆ. ಆದರೆ ಎದುರಾಳಿ ಮಡ್ವಡೇವ್ ಕೂಡಾ ಅಷ್ಟೇ ಪ್ರಬಲ ಆಟಗಾರನಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.