ನೆಲಕ್ಕೆ ಬಿದ್ದ ಆಹಾರ ಸೇವಿಸುವುದು ಸುರಕ್ಷಿತವೇ?

ಗುರುವಾರ, 4 ಅಕ್ಟೋಬರ್ 2018 (08:58 IST)
ಬೆಂಗಳೂರು: ಆಹಾರ ಸೇವಿಸುವಾಗ ಅಕಸ್ಮಾತ್ತಾಗಿ ನೆಲಕ್ಕೆ ಬಿದ್ದರೆ ಅದನ್ನು ತಕ್ಷಣ ಎತ್ತಿ ಸೇವಿಸುವುದರಿಂದ ತೊಂದರೆಯಿದೆಯೇ? ಆರೋಗ್ಯ ತಜ್ಞರು ಏನು ಹೇಳುತ್ತಾರೆ?

ನಮಗೆ ಇಷ್ಟವಾದ ಅಥವಾ ದುಬಾರಿ ಬೆಲೆ ಕೊಟ್ಟು ಖರೀದಿಸಿದ ಆಹಾರ ನೆಲಕ್ಕೆ ಬಿದ್ದು ವ್ಯರ್ಥವಾಗತ್ತದೆ ಎನ್ನುವ ಬೇಸರದಲ್ಲಿ ಕೆಲವೊಮ್ಮೆ ಹೆಕ್ಕಿ ಸೇವಿಸುತ್ತೇವೆ.

ಆದರೆ ಆರೋಗ್ಯ ತಜ್ಞರ ಪ್ರಕಾರ ಇದು ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಂತೆ. ನಾವು ಓಡಾಡುವ ನೆಲದಲ್ಲಿ ಅದೆಷ್ಟೋ ಬ್ಯಾಕ್ಟೀರಿಯಾಗಳಿರುತ್ತವೆ. ಇದು ನೆಲಕ್ಕೆ ಬಿದ್ದ ಆಹಾರದ ಮೇಲೆ ಸೆಕೆಂಡುಗಳ ಅಂತರದಲ್ಲಿ ಸೇರಿಕೊಳ್ಳುತ್ತವೆ. ಹೀಗಾಗಿ ಇಂತಹ ಆಹಾರ ಸೇವನೆಯಿಂದ ಬೇಡದ, ಅನಾರೋಗ್ಯಕರ ಬ್ಯಾಕ್ಟೀರಿಯಾಗಳು ದೇಹವನ್ನು ಸೇರಿಕೊಳ್ಳುವ ಅಪಾಯವಿರುತ್ತದೆ. ಹಾಗಾಗಿ ನೆಲಕ್ಕೆ ಬಿದ್ದ ಆಹಾರವನ್ನು ಸೇವಿಸುವುದು ಸೂಕ್ತವಲ್ಲ ಎನ್ನಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ