ಐಶ್ವರ್ಯಾ ಸರ್ಜಾ-ಉಮಾಪತಿಗೆ ಲವ್ ಸ್ಟೋರಿ ಆರಂಭವಾಗಿದ್ದು ಹೇಗೆ?

ಗುರುವಾರ, 29 ಜೂನ್ 2023 (08:40 IST)

ಚೆನ್ನೈ: ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಹಾಗೂ ತಮಿಳು ನಟ ಉಮಾಪತಿ ರಾಮಯ್ಯ ಮುಂದಿನ ವರ್ಷ ಆರಂಭದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಪಕ್ಕಾ ಆಗಿದೆ.

ಇಬ್ಬರದ್ದೂ ಪ್ರೇಮ ವಿವಾಹವಾಗಲಿದೆ. ಐಶ್ವರ್ಯಾ ಮತ್ತು ಉಮಾಪತಿ ಕಳೆದ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಲಿದ್ದಾರೆ.

ಈ ಜೋಡಿಯ ಪ್ರೇಮ ಕತೆ ಶುರುವಾಗಿದ್ದು ತಮಿಳು ವಾಹಿನಿಯೊಂದರ ರಿಯಾಲಿಟಿ ಶೋನಿಂದ ಎನ್ನಲಾಗಿದೆ. ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ವೇಳೆ ಇಬ್ಬರೂ ಪರಸ್ಪರ ಪರಿಚಿತರಾಗಿದ್ದರು. ಅಲ್ಲಿಂದ ಇಬ್ಬರ ನಡುವೆ ಸ್ನೇಹ ಆರಂಭವಾಗಿತ್ತು. ಇಬ್ಬರೂ ಇದುವರೆಗೆ ತೆರೆ ಮೇಲೆ ಜೊತೆಯಾಗಿ ನಟಿಸಿಲ್ಲ. ಆದರೆ ರಿಯಾಲಿಟಿ ಶೋನಿಂದ ಶುರುವಾದ ಸ್ನೇಹ ಇಬ್ಬರ ಸಂಬಂಧವನ್ನು ಗಟ್ಟಿ ಮಾಡಿತ್ತು. 

 

ಈ ಹಿಂದೆ ಅರ್ಜುನ್ ಸರ್ಜಾ ಆಂಜನೇಯ ಸ್ವಾಮಿ ದೇವಾಲಯವೊಂದನ್ನು ಕಟ್ಟಿಸಿ ಅದ್ಧೂರಿಯಾಗಿ ಉದ್ಘಾಟಿಸಿದ್ದು ಎಲ್ಲರಿಗೂ ಗೊತ್ತಿರುತ್ತದೆ. ಆ ಸಮಾರಂಭಕ್ಕೆ ಉಮಾಪತಿ ಕುಟುಂಬದವರೂ ಬಂದಿದ್ದರು ಎನ್ನಲಾಗಿದೆ. ಆಗಲೇ ಎರಡೂ ಮನೆಯವರಿಗೂ ಇಬ್ಬರ ಸಂಬಂಧದ ಬಗ್ಗೆ ತಿಳಿದುಬಂದಿದೆ. ಇದೀಗ ಎರಡೂ ಮನೆಯವರು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ