ಬೋಟ್ ಖರೀದಿಗೆ ನಿರುತ್ಸಾಹ ತೋರಿದ ಕರಾವಳಿ ಮೀನುಗಾರರು?
ಸರ್ಕಾರ ಸೂಚಿಸಿದ ದೋಣಿಗಳ ಖರೀದಿಗೆ ಇಲ್ಲಿನ ಮೀನುಗಾರರು ಒಪ್ಪದಿರುವುದು ಯೋಜನೆಯ ಹಿನ್ನೆಲೆಗೆ ಕಾರಣವಾಗಿದೆ. ಮೀನುಗಾರರ ಬೇಡಿಕೆಗೆ ತಕ್ಕ ದೋಣಿ ಖರೀದಿಗೆ ಸಹಾಯಧನ ಒದಗಿಸಲು ಸರ್ಕಾರ ಒಪ್ಪದ ಕಾರಣ ಯೋಜನೆ ಘೋಷಣೆಗೆ ಸೀಮಿತವಾಗಿಯೇ ಉಳಿದುಕೊಂಡಿದೆ.
ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಸಹಯೋಗದೊಂದಿಗೆ ಕಳೆದ ರಾಜ್ಯ ಬಜೆಟ್ನಲ್ಲಿ ಸರ್ಕಾರ 100 ಆಳಸಮುದ್ರ ಮೀನುಗಾರಿಕೆ ದೋಣಿಗಳ ಖರೀದಿಗೆ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿತ್ತು. ಈ ಪೈಕಿ 50 ದೋಣಿಗಳನ್ನು ಉತ್ತರ ಕನ್ನಡಕ್ಕೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.