ರೌಡಿಶೀಟರ್ ಮನೆಗಳಲ್ಲಿ ಮಾರಾಕಸ್ತ್ರ ಪತ್ತೆ- ಡಿಸಿಪಿ ಶರಣಪ್ಪ

ಬುಧವಾರ, 23 ನವೆಂಬರ್ 2022 (15:16 IST)
ಬೆಂಗಳೂರಿನಲ್ಲಿ ರೌಡಿಶೀಟರ್ ಮನೆಗಳ‌ ಮೇಲೆ‌ ಸಿಸಿಬಿ ದಾಳಿ ಮಾಡಿರುವ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಪ್ರತಿಕ್ರಿಯಿಸಿದ್ದು,ಕೆಲವು ರೌಡಿಶೀಟರ್ ಗಳು ಬಿಬಿಎಂಪಿ ಚುನಾವಣೆ ತಯಾರಿಯಲ್ಲಿದ್ದರು.ನಗರದಾದ್ಯಂತ ಆಕ್ಟಿವ್ ಇರುವ ರೌಡಿಶೀಟರ್ ಮನೆ ಮೇಲೆ ದಾಳಿ ಮಾಡಲಾಗಿದೆ.ನ್ಯಾಯಲಯದ ವಾರೆಂಟ್ ಇದ್ದರು ಕೆಲವರು ಕೋರ್ಟ್‌ ಗೆ ಅಟೆಂಡ್ ಆಗಿರಲಿಲ್ಲ.ಇನ್ನೂ ಕೆಲವರು ಬಿಬಿಎಂಪಿ ಚುನಾವಣೆ ತಯಾರಿಯಲ್ಲಿ ಇದ್ರು.ಕೆಲವರು ತಮ್ಮ ಮನೆಯವರನ್ನ ಚುನಾವಣೆಗೆ ನಿಲ್ಲಿಸೋಕೆ ಸಿದ್ದತೆ ಮಾಡಿದ್ರು.ಕೆಲವರು ಚುನಾವಣೆಗಾಗಿ ಹಣಕಾಸು ವಸೂಲಿ ಮಾಡ್ತಿದ್ದಾರೆ.ಬಿಬಿಎಂಪಿ ಚುನಾವಣೆ ಹಾಗೂ ಸಮಾಜದ ಸ್ವಾಸ್ಥ್ಯ ಸಲುವಾಗಿ ದಾಳಿ ನಡೆಸಲಾಗಿದೆ.ದಾಳಿ ವೇಳೆ ಕೆಲವರು ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ.ಸೈಕಲ್ ರವಿ, ಜೆಸಿಬಿ ನಾರಾಯಣ, ಮಲಯಾಳಿ ಮಧು, ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ, ಒಂಟೆ ರೋಹಿತ್ ನಾಪತ್ತೆಯಾಗಿದ್ದು.ವಶಕ್ಕೆ ‌ಪಡೆದಿರುವ 26 ರೌಡಿಗಳ ವಿಚಾರಣೆ ನಡೆಸಲಾಗುತ್ತೆ.ರೌಡಿಗಳ ಆದಾಯ ಮತ್ತು ಅವರು‌ ಚಟುವಟಿಕೆಗಳ ಬಗ್ಗೆ ತನಿಖೆ ಮಾಡ್ತಾ ಇದ್ದೀವಿ.ಕೆಲ ರೌಡಿಗಳ ಮನೆ ಮೇಲೆ ದಾಳಿ ವೇಳೆ ಮಾರಾಕಾಸ್ತ್ರಗಳು ಪತ್ತೆ ಆಗಿವೆ ಎಂದು ಜಂಟಿ ಆಯುಕ್ತ ಡಾ. ಶರಣಪ್ಪ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ